ಆತ್ಮೀಯ ಅರ್ಜಿದಾರರೇ, ನಿಮ್ಮ ಬಳಿ ಜಾತಿ / ಆದಾಯ / ಇ.ಡಬ್ಲ್ಯೂ.ಎಸ್. ಆರ್.ಡಿ
ಪ್ರಮಾಣಪತ್ರವಿಲ್ಲದಿದ್ದರೆ,ದಯವಿಟ್ಟು
Nadakacheri
ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಸದರಿ ಪ್ರಮಾಣಪತ್ರಗಳಿಗಾಗಿ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ಹಾಗೂ ಸ್ವೀಕೃತಿ ಪ್ರತಿಯಲ್ಲಿ ಉಲ್ಲೇಖಿಸಲಾಗಿರುವ ಆರ್.ಡಿ ಸಂಖ್ಯೆಯನ್ನು ಎಸ್.ಎಸ್.ಪಿ ಯಲ್ಲಿ ಸಲ್ಲಿಸಿ ನಿಮ್ಮ ಖಾತೆ ಸೃಜನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ಅರ್ಜಿ ಸಲ್ಲಿಸಲು ಪ್ರಮಾಣಪತ್ರಗಳನ್ನು ನೀವು ಪಡೆಯುವವರೆಗೆ ಕಾಯಬೇಕಾಗಿಲ್ಲ.
ಹೊಸ ಮತ್ತು ನವೀಕರಣ - ಎರಡೂ ವಿಧದ ವಿದ್ಯಾರ್ಥಿಗಳು 2020-21ರ ಸಾಲಿನ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬೇಕು. (ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಮೂಲಕ 2019-20ರಲ್ಲಿ ವಿದ್ಯಾರ್ಥಿವೇತನ ಪಡೆದವರು ಸಹ ಅರ್ಜಿ ಸಲ್ಲಿಸಬೇಕು)
ಸಹಾಯವಾಣಿ
: 080 - 44554455 ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ (ಮೆಟ್ರಿಕ್ ನಂತರ) ಪ್ರಿಯ ಅರ್ಜಿದಾರರೇ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನವನ್ನು ಪಡೆಯಲು ದಯವಿಟ್ಟು ನಿಮ್ಮ ಆಧಾರ್ ಸಂಖ್ಯೆಯನ್ನು ನಿಮ್ಮ ಬ್ಯಾಂಕ್ ಖಾತೆಗೆ ಹಾಗೂ NPCI ಗೆ ಜೋಡಣೆ ಮಾಡಿಸಿಕೊಳ್ಳಿ. ಈ ಕುರಿತಂತೆ ಆಧಾರ್ ಜೋಡಣೆಯಾಗದ ಅರ್ಜಿದಾರರ ನೋಂದಾಯಿತ ಮೊಬೈಲ್ ಸಂಖ್ಯೆಗೆ SMS ಅನ್ನು ಕೂಡ ಕಳುಹಿಸಲಾಗುತ್ತಿದೆ. ದಯವಿಟ್ಟು ಕೂಡಲೇ ನಿಮ್ಮ ಬ್ಯಾಂಕಿಗೆ ಭೇಟಿ ನೀಡಿ ನಿಮ್ಮ ಆಧಾರ್ ಅನ್ನು NPCI ಗೆ ಜೋಡಣೆ ಮಾಡಿಸಿ. ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ಎಸ್ಎಸ್ಪಿಯಲ್ಲಿ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 31 ಮಾರ್ಚ್ 2020 ರವರೆಗೆ ವಿಸ್ತರಿಸಲಾಗಿದೆ