You don't have javascript enabled. Please Enable Javascript and Continue to use Application.

ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ


ಏಕೀಕೃತ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ (ಎಸ್.‌ಎಸ್‌.‌ಪಿ) ವನ್ನು ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ವಿವಿಧ ಯೋಜನೆಗಳ ಅಡಿಯಲ್ಲಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನವನ್ನು ಮಂಜೂರು ಮಾಡಲು ಇ-ಆಡಳಿತ ಕೇಂದ್ರವು ಅಭಿವೃದ್ಧಿಪಡಿಸಿದೆ.

ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ (೧೦ ನೇ ತರಗತಿಯ ನಂತರದ ಯಾವುದೇ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನ್ವಯ)

 • ವಿದ್ಯಾರ್ಥಿವೇತನ ವಿತರಿಸುವ ಇಲಾಖೆಗಳು:

  • 1. ಸಮಾಜ ಕಲ್ಯಾಣ ಇಲಾಖೆ
  • 2. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ
  • 3. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
  • 4. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
  • 5. ತಾಂತ್ರಿಕ ಶಿಕ್ಷಣ ಇಲಾಖೆ
  • 6. ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ
  • 7. ವೈದ್ಯಕೀಯ ಶಿಕ್ಷಣ ಇಲಾಖೆ
  • 8. ಆಯುಷ್ ಇಲಾಖೆ
  • 9. ಕಾಲೇಜು ಶಿಕ್ಷಣ ಇಲಾಖೆ
  • 10. ವಿಕಲಚೇತನರ ಕಲ್ಯಾಣ ಇಲಾಖೆ

 • ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಕಾಲೇಜು ಮಾಹಿತಿ ವ್ಯವಸ್ಥೆ(CIS - College Information System) ನ ಮೂಲಕ 70 ವಿಶ್ವವಿದ್ಯಾಲಯಗಳು, 8 ಇಲಾಖೆಗಳು, 14,143 ಕಾಲೇಜು- 243 ಕೋರ್ಸ್ - 2516 ಕೋರ್ಸ್ ಸಂಯೋಜನೆ - 15 ಸೀಟ್ ವಿಧ ಹಾಗೂ ಶುಲ್ಕ ವಿವರಗಳನ್ನು ಪೂರ್ವ-ಮ್ಯಾಪಿಂಗ್ ಮಾಡಲಾಗಿದೆ.

 • ಮೆಟ್ರಿಕ್ ನಂತರದ ಯೋಜನೆಗಳಿಗಾಗಿ ಉನ್ನತ ಶಿಕ್ಷಣ ಇಲಾಖೆಯ ಯುನಿಡೇಟಾ(UniData) ಸರ್ವರ್(https://unidata.karnataka.gov.in) ಮೂಲಕ ಎಲ್ಲ ವಿಶ್ವವಿದ್ಯಾಲಯಗಳು ಮತ್ತು ಇಲಾಖೆಗಳಿಂದ ವಿದ್ಯಾರ್ಥಿಗಳ ಶೈಕ್ಷಣಿಕ ವಿವರಗಳ ದತ್ತಾಂಶವನ್ನು ಸಂಗ್ರಹಿಸಲಾಗುತ್ತಿದ್ದು ಸದರಿ ದತ್ತಾಂಶದ ಆಧಾರದ ಮೇಲೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಅರ್ಜಿಗಳ ಪರಿಶೀಲನೆ ಹಾಗೂ ಮಣಜೂರಾತಿ ಪ್ರಕ್ರಿಯೆಯನ್ನು ವಿನ್ಯಾಸಗೊಳಿಸಲಾಗಿದೆ. ಸದರಿ UniData ದತ್ತಾಂಶದಲ್ಲಿ 59,98,243 ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ಶೈಕ್ಷಣಿಕ ಮಾಹಿತಿ ಲಭ್ಯವಿದೆ.

 • ಇತರೆ ರಾಜ್ಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕದ ಅರ್ಹ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಇ-ದೃಢೀಕರಣ (e-Attestation) ವ್ಯವಸ್ಥೆಯ ಮೂಲಕ ಅವರ ಶೈಕ್ಷಣಿಕ ಹಾಗೂ ಶುಲ್ಕ ರಶೀದಿ ದಾಖಲೆಗಳ ಇ-ದೃಢೀಕರಣ ಮಾಡಲಾಗುತ್ತಿದೆ.

 • 2019-20 ನೇ ಸಾಲಿನಿಂದ ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಮಂಜೂರು ಮಾಡಲು ವಿದ್ಯಾರ್ಥಿಗಳ ದಾಖಲೆಗಳ ಪರಿಶೀಲನೆಯನ್ನು ವಿದ್ಯುನ್ಮಾನಗೊಳಿಸಲು ಇ-ದೃಢೀಕರಣ ಪ್ರಕ್ರಿಯೆಯನ್ನು ಆರಂಭಿಸಲಾಯಿತು. ಈ ನಿಟ್ಟಿನಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅವಶ್ಯವಾಗಿರುವ ದಾಖಲೆಗಳನ್ನು ವಿದ್ಯುನ್ಮಾನವಾಗಿ ದೃಢೀಕರಿಸಲು ರಾಜ್ಯಾದ್ಯಂತ 11,174 ಇ-ದೃಢೀಕರಣ ಆಧಿಕಾರಿಗಳನ್ನು ನೇಮಿಸಲಾಗಿದೆ. ಇ-ದೃಢೀಕರಿಸಿದ ದಾಖಲೆಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಮತ್ತು ಮರುಬಳಕೆ ಮಾಡಲು ಬ್ಲಾಕ್‌ಚೈನ್ (BLOCK CHAIN TECHNOLOGY) ಎಂಬ ವಿನೂತನ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಈ ತಂತ್ರಜ್ಞಾನದ ಬಳಕೆಯಿಂದ ವಿದ್ಯಾರ್ಥಿವೇತನಕ್ಕೆ ಅವಶ್ಯವಿರುವ ದಾಖಲೆಗಳ ನೈಜತೆಯನ್ನು ಸುಲಭವಾಗಿ ಪರೀಕ್ಷಿಸಬಹುದು ಮತ್ತು ಇದರಿಂದಾಗಿ ವಿದ್ಯಾರ್ಥಿವೇತನದ ಪಾವತಿಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬಹುದಾಗಿದೆ. ಸರ್ಕಾರದಿಂದ ನೇಮಿಸಲಾಗಿರುವ ಇ-ದೃಢೀಕರಣ ಅಧಿಕಾರಿಗಳು ತಮ್ಮ ಆಧಾರ್ ಸಂಖ್ಯೆಯನ್ನು ಉಪಯೋಗಿಸಿ ಇ-ಸಹಿಯನ್ನು ಮಾಡುವ ಮೂಲಕ, ತಮ್ಮ ಸಂಸ್ಥೆಯ ವಿದ್ಯಾರ್ಥಿಗಳ ದಾಖಲೆಗಳನ್ನು ದೃಢೀಕರಿಸುತ್ತಾರೆ.

 • 2019-20 & 2020-21 ನೇ ಸಾಲಿನಲ್ಲಿ ಮಂಜೂರಾದ ಮೊತ್ತದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿಗಳು ಕಾಲೇಜಿಗೆ ಪಾವತಿ ಮಾಡಿರುವ ಶುಲ್ಕ ಮೊತ್ತವನ್ನು ವಿದ್ಯಾರ್ಥಿಗಳ ಆಧಾರ್ ಜೋಡಿತ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಹಾಗೂ ಉಳಿದ ಮೊತ್ತವನ್ನು ಆಯಾ ಕಾಲೇಜುಗಳ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮೂಲಕ ಪಾವತಿಮಾಡಲಾಗಿದೆ.ಇತರೆ ಎಲ್ಲಾ ಇಲಾಖೆಗಳ ವಿದ್ಯಾರ್ಥಿಗಳಿಗೆ ಮಂಜೂರಾದ ಶುಲ್ಕದ ಮೊತ್ತವನ್ನು ನೇರವಾಗಿ ವಿದ್ಯಾರ್ಥಿಗಳ ಆಧಾರ್ ಜೋಡಿತ ಖಾತೆಗೆ ಪಾವತಿಸಲಾಗಿದೆ.

ಸಹಾಯವಾಣಿ

ಮೆಟ್ರಿಕ್‌ ನಂತರ ವಿದ್ಯಾಥಿ೯ವೇತನ ಮತ್ತು ಇ-ಧೃಢೀಕರಣ ತಂತ್ರಾಂಶದಲ್ಲಿನ ತಾಂತ್ರಿಕ ದೋಷಗಳ ನಿವಾರಣೆಗಾಗಿ postmatrichelp@karnataka.gov.in ಗೆ ಪೂಣ೯ ವಿವರಗಳೊಂದಿಗೆ ಮೇಲ್‌ ಕಳುಹಿಸಿ.


ಸಮಾಜ ಕಲ್ಯಾಣ ಇಲಾಖೆ

9482300400 / 080 22634300
swdcontrolroom@gmail.com

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ

080-22261789

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ

8277799990 / 080-22535931
email: gokdomssp2020@gmail.com

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

8050770005 / 8050770004
email: bcwd.scholarship@karnataka.gov.in

ತಾಂತ್ರಿಕ ಶಿಕ್ಷಣ ಇಲಾಖೆ

080 - 22356949

Disability Welfare Department

080 - 22860907
email: dirdwdscka@gmail.com