You don't have javascript enabled. Please Enable Javascript and Continue to use Application.


   ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2023-24 ರಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟಂತೆ ಯಾವುದೇ ವಿದ್ಯಾರ್ಥಿವೇತನ ಯೋಜನೆಗಳಿಗೆ ಅರ್ಜಿಗಳನ್ನು ಸ್ವೀಕರಿಸಲು ಪ್ರಾರಂಭಿಸಿಲ್ಲ. ಆದಾಗ್ಯೂ, ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಯು 2023-24ನೇ ಸಾಲಿಗೆ ಅರ್ಜಿ ಸಲ್ಲಿಕೆಯನ್ನು ಮುಂದುವರಿಸಬಹುದು ಹಾಗೂ ಸಂಬಂಧಿತ ಸರ್ಕಾರಿ ಆದೇಶಗಳನ್ನು ಹೊರಡಿಸಲಾದ ನಂತರ ಅವಳ / ಅವನ ಅರ್ಜಿಯನ್ನು ಸದರಿ ಇಲಾಖೆಯ ಯೋಜನೆಗಳಿಗೆ ಅರ್ಹತೆಯನುಸಾರ ಪರಿಗಣಿಸಲಾಗುವುದು.

   2023-24 ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಹಾಗೂ ಈಗಾಗಲೇ ಅರ್ಜಿ ಸಲ್ಲಿಸಿರುವ ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳು ತಮ್ಮ ಲಾಗಿನ್ ಮೂಲಕ Aadhar based e KYC ಅನ್ನು ಪೂರ್ಣಗೊಳಿಸಿ Freeship Card ಅನ್ನು Download ಮಾಡಿಕೊಳ್ಳಬಹುದಾಗಿದೆ.

ಮೆಟ್ರಿಕ್ ನಂತರ ವಿದ್ಯಾರ್ಥಿವೇತನಕ್ಕಾಗಿ ಖಾತೆ ಸೃಜಿಸಿ ಅರ್ಜಿ ಸಲ್ಲಿಸಲು ಅಗತ್ಯವಿರುವ ಮಾಹಿತಿ / ದಾಖಲೆಗಳು

1. ವಿದ್ಯಾರ್ಥಿಗಳ ಆಧಾರ್ ಸಂಖ್ಯೆ ಮತ್ತು ಆಧಾರ್ ನಲ್ಲಿ ಇರುವ ಹಾಗೆ ಹೆಸರು

2. ವಿದ್ಯಾರ್ಥಿಯ ಮೊಬೈಲ್‌ ಸಂಖ್ಯೆ

3. ವಿದ್ಯಾರ್ಥಿಗಳ ಇ-ಮೇಲ್ ಐ.ಡಿ.

4. ವಿದ್ಯಾರ್ಥಿಗಳ ಎಸ್.ಎಸ್.ಎಲ್.ಸಿ ನೋಂದಣಿ ಸಂಖ್ಯೆ

5. ವಿದ್ಯಾರ್ಥಿಯ ಹೆಸರಿನಲ್ಲಿ ಇರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್.ಡಿ ಸಂಖ್ಯೆ

6. ವಿದ್ಯಾರ್ಥಿಯು ವಿಕಲಚೇತನರಾಗಿದ್ದಲ್ಲಿ ಯು.ಡಿ.ಐ.ಡಿ ಗುರುತಿನ ಸಂಖ್ಯೆ

7. ವಿದ್ಯಾರ್ಥಿಯು ವಾಸವಿರುವ ಜಿಲ್ಲೆ , ತಾಲ್ಲೂಕು, ವಿಧಾನಸಭಾ ಕ್ಷೇತ್ರದ ಹೆಸರು ಮತ್ತು ಮನೆಯ ವಿಳಾಸ

8. ವಿದ್ಯಾರ್ಥಿಯ ಕಾಲೇಜು ದಾಖಲಾತಿ/ನೋಂದಣಿ ಸಂಖ್ಯೆ

9. ಸಂಬಂದಪಟ್ಟ ದಾಖಲೆಗಳ ಇ-ದೃಢೀಕರಣ ಸಂಖ್ಯೆ (ಅನ್ವಯವಾದಲ್ಲಿ )

10. ಹಾಸ್ಟೆಲ್ ವಿವರಗಳು (ಅನ್ವಯವಾದಲ್ಲಿ )

Note!

  1. ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಲು ವಿದ್ಯಾರ್ಥಿಯು ಕುಟುಂಬ ತಂತ್ರಾಂಶದಲ್ಲಿ ನೋಂದಣಿಯಾಗಿ ಕುಟುಂಬ ಗುರುತಿನ ಸಂಖ್ಯೆಯನ್ನು ಹೊಂದುವುದು ಕಡ್ಡಾಯವಾಗಿರುತ್ತದೆ. ನಿಮ್ಮ ಕುಟುಂಬ ಗುರುತಿನ ಸಂಖ್ಯೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ -

    https://kutumba-services.karnataka.gov.in/KutumbaServices


    ವಿದ್ಯಾರ್ಥಿಯ ಕುಟುಂಬ ಗುರುತಿನ ಸಂಖ್ಯೆ ಲಭ್ಯವಿಲ್ಲದಿದ್ದಲ್ಲಿ, ಕುಟುಂಬ ತಂತ್ರಾಂಶದಲ್ಲಿ ನೋಂದಣಿಯಾಗಲು ಇಲ್ಲಿ ಕ್ಲಿಕ್ ಮಾಡಿ -

    https://kutumba.karnataka.gov.in/mykutumba

  2. ವಿದ್ಯಾರ್ಥಿಯು ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 2023-24 ನೇ ಸಾಲಿನ ವಿದ್ಯಾರ್ಥಿಯ ಶೈಕ್ಷಣಿಕ ಮಾಹಿತಿಯು UUCMS ತಂತ್ರಾಂಶದಲ್ಲಿ ಲಭ್ಯವಿರುವುದು ಅಥವಾ ಸಂಬಂಧಿಸಿದ ವಿಶ್ವವಿದ್ಯಾಲಯ / ಬೋರ್ಡ್ ಸದರಿ ಶೈಕ್ಷಣಿಕ ಮಾಹಿತಿಯನ್ನು UNIDATA ಸರ್ವರ್ ಗೆ ರವಾನಿಸುವುದು ಕಡ್ಡಾಯವಾಗಿರುತ್ತದೆ.

  3. ವಿದ್ಯಾರ್ಥಿಯು ಹಾಸ್ಟೆಲರ್ ಎಂದು ಅರ್ಜಿ ಸಲ್ಲಿಸಲು ಸದರಿ ವಿದ್ಯಾರ್ಥಿಯ ವಸತಿನಿಲಯ ದಾಖಲಾತಿ ಮಾಹಿತಿಯು ರಾಜ್ಯ ವಸತಿನಿಲಯ ತಂತ್ರಾಂಶ (SHP) ಅಥವಾ ಎಸ್.ಎಸ್.ಪಿ - ಹೆಚ್.ಎಂ.ಐ.ಎಸ್ (SSP – HMIS) ತಂತ್ರಾಂಶದಲ್ಲಿ ಲಭ್ಯವಿರುವುದು ಕಡ್ಡಾಯವಾಗಿರುತ್ತದೆ.

ಸಹಾಯವಾಣಿ

1902 : State Scholarship Portal Helpline Number.


ಸಮಾಜ ಕಲ್ಯಾಣ ಇಲಾಖೆ

9482300400 / 080 22634300
swdcontrolroom@gmail.com

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ

9482300400 / 080 22634300
swdcontrolroom@gmail.com

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ

8277799990

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

8050770004 / 8050770005

ಕೃಷಿ ಇಲಾಖೆ

1800-425-3553

ಕುಟುಂಬ

080-22371030
kutumbasupport@karnataka.gov.in